Rules to be followed/ಪಾಲಿಸಬೇಕಾದ ನಿಯಮಗಳು:

Explanation in Englishಕನ್ನಡದಲ್ಲಿ ವಿವರಣೆ

Welcome to Gnanadeevige!

If you are a qualified unemployed or a student or a teacher you can earn some extra money by writing to our website.

1. If you are interested in contributing Notes:

  1.1 You can give NOTES of any DEGREEs like Bachelor's Degree (BA, BCom, BSc, BE or BTech, BBM, BCA or others ) or Master Degree (MA, MCom, MSc, ME or MTech, MBA, MCA or others) and any Diploma.
  1.2 If you give scanned copy of a hand written notes, it must be legible and precise.
  1.3 You should clarify any doubts regarding the content of the notes to our visitors.
  1.4 After the notes is published on our website, no disputes should arise regarding its ownership.

2. For answering Descriptive Question Papers:

  2.1 You have to inform us your choice of subject and your command over it. Then we will email you questions from your choice of subject. You are required to answer those questions only.
  2.2 We will not pay for any questions answered other than those we have sent.
  2.3 You have to answer the questions within the given time.
  2.4 Our editorial team will thoroughly check the answers you will send. Then it will be published on our website under your name and the designation you provide. If your answers are incomplete, vague or wrong your submission will be rejected completely and will not be published. We will not pay any money for such submissions and we will not give any more questions to answer for that particular person.
  2.5 You should be ready to clarify any doubts to our visitors regarding the answers you’ve provided.

3. For answering Multiple Choice Question Papers:

  3.1 You have to inform us your choice of subject and your command over it. Then we will email you a question paper of your choice of subject. You are required to answer that question paper only. We will not pay for any other answered question paper.
  3.2 You have to answer the question paper within the given time.
  3.3 There should not be any confusion regarding the choice of answer and there should be explanation for answer wherever necessary.
  3.4 Solutions for problems must be clearly shown.
  3.5 Our editorial team will thoroughly check the answers you will send. Then it will be published on our website under your name and your designation. If your answers are incomplete, vague or wrong your submission will be rejected completely. We will not pay any money for such submissions and we will not give any more questions to answer for that particular person.
  3.6 You should be ready to clarify any doubts to our visitors regarding the answers you've provided.

Regarding Payment:

   Payments to our writers would be made monthly, at the end of every month.
   The payment would be made only through online transfer.
   Bank name, bank branch, bank account number, IFSC code and scanned copy of your Aadhaar card must be provided to ensure that money is transferred to your account only.
   Note that it is mandatory that you have your own bank account for authentication purposes; you cannot give your family members’, friends’ or someone else’s account number.
   If these things sounds good to you, contact us by emailing to teamgnanadeevige@gmail.com

ನಮ್ಮ ಜ್ಞಾನದೀವಿಗೆ ವೆಬ್ ಸೈಟ್ ಗೆ ಬರೆಯುವ ಮೂಲಕ ಹಣ ಸಂಪಾದಿಸಿ:

ನೀವು ವಿದ್ಯಾವಂತ ನಿರುದ್ಯೋಗಿ, ಉಪನ್ಯಾಸಕ, ಅಥವಾ ವಿದ್ಯಾರ್ಥಿಯಾಗಿದ್ದು ನಮ್ಮ ವೆಬ್ ಸೈಟ್ ಗೆ ಉಪಯುಕ್ತವಾಗುವಂತಹ ಸಂಪನ್ಮೂಲಗಳಾದ ನೋಟ್ಸ್, ಲೇಖನಗಳು ಅಥವಾ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ ಕೊಟ್ಟಲ್ಲಿ ನಿಮಗೆ ಹಣ ನೀಡಲಾಗುವುದು.

ಪಾಲಿಸಬೇಕಾದ ನಿಯಮಗಳು:

1. ಯಾವುದೇ ಡಿಪ್ಲೋಮ, ಪದವಿ ಅಥವಾ ಉನ್ನತ ಪದವಿಯ ನೋಟ್ಸ್ ಕೊಡುವಿರಾದಲ್ಲಿ:

  1.1 ನೀವು ಕೊಡುವ scanned ನೋಟ್ಸ್ ಕೈ ಬರಹದಲ್ಲಿದ್ದರೆ ಅದು ಓದಲು ಯೋಗ್ಯವಾಗಿರತಕ್ಕದ್ದು.
  1.2 ನೋಟ್ಸ್ ಪ್ರಕಟಗೊಂಡ ನಂತರ ಬಳಕೆದಾರರು ಯಾವುದೇ ಪ್ರಶ್ನೆಗಳನ್ನು ಕೇಳಿದರೆ ನೀವು ಅದಕ್ಕೆ ಸೂಕ್ತ ಉತ್ತರಗಳನ್ನು ಒದಗಿಸುವ ಹಾಗಿರಬೇಕು.
  1.3 ನೋಟ್ಸ್ ಪ್ರಕಟಿಸಿದ ನಂತರ ನೋಟ್ಸ್ ಗೆ ಸಂಬಂಧಿಸಿದಂತೆ ಯಾವುದೇ ತಕರಾರುಗಳು ಬರಬಾರದು.

2. ನೀವು ವಿವರಣಾತ್ಮಕವಾದ ಪ್ರಶ್ನೆ ಪತ್ರಿಕೆ (Descriptive Question Paper)ಗೆ ಉತ್ತರಿಸಲು ಇಚ್ಛಿಸುವಿರಾದಲ್ಲಿ :

  2.1 ನಿಮ್ಮ ಆಯ್ಕೆಯ ವಿಷಯ ಹಾಗು ನಿಮಗಿರುವ ವಿಷಯ ಪರಿಣಿತಿಯನ್ನು ನಮಗೆ ಮೊದಲು ತಿಳಿಸಬೇಕು.
  2.2 ನೀವು ತಿಳಿಸಿದ ವಿಷಯಕ್ಕೆ ನಮಗೆ ಉತ್ತರ ಬೇಕಾದ ಪ್ರಶ್ನೆಗಳನ್ನು ನಾವು ನಿಮ್ಮ ಇ -ಮೇಲ್ ಖಾತೆಗೆ ಕಳಿಸುತ್ತೇವೆ. ಈ ಪ್ರಶ್ನೆಗಳಲ್ಲದೆ ಬೇರಾವುದೇ ಪ್ರಶ್ನೆಗಳನ್ನು ನೀವೇ ಆರಿಸಿಕೊಂಡು ಉತ್ತರಿಸಿದಲ್ಲಿ ಅದಕ್ಕೆ ಯಾವುದೇ ರೀತಿಯ ಹಣ ಸಂದಾಯ ಮಾಡುವುದಿಲ್ಲ.
  2.3 ಪ್ರಶ್ನೆಗಳಿಗೆ ಉತ್ತರಿಸಿ ನಿಗದಿತ ಸಮಯದಲ್ಲಿ ನಮಗೆ ಕಳಿಸತಕ್ಕದ್ದು.
  2.4 ನೀವು ಕಳಿಸುವ ಉತ್ತರಗಳನ್ನು ನಮ್ಮ ಸಂಪಾದಕರು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ತಿದ್ದುಪಡಿಗಳನ್ನು ಮಾಡಿ ನಿಮ್ಮ ಅಂಕಣವನ್ನು ನಿಮ್ಮ ಹೆಸರು ಹಾಗೂ ಪದವಿಯಡಿಯಲ್ಲಿಯೇ ನಮ್ಮ ಜಾಲತಾಣದಲ್ಲಿ ಪ್ರಕಟಿಸುವರು. ಒಂದು ವೇಳೆ ಪರಿಶೀಲಿಸುವ ಸಮಯದಲ್ಲಿ ನಿಮ್ಮ ಉತ್ತರಗಳು ಅಪೂರ್ಣ, ಅಸ್ಪಷ್ಟ ಅಥವಾ ತಪ್ಪಾಗಿದ್ದಲ್ಲಿ ನಿಮ್ಮ ಸಲ್ಲಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುವುದು. ಇಂತಹ ಸಲ್ಲಿಕೆಗಳಿಗೆ ಯಾವುದೇ ರೀತಿಯ ಹಣ ಸಂದಾಯ ಮಾಡುವುದಿಲ್ಲ ಹಾಗೂ ಮುಂದೆ ಯಾವುದೇ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನೂ ಸ್ವೀಕರಿಸುವುದಿಲ್ಲ.
  2.5 ನಿಮ್ಮ ಉತ್ತರಗಳಿಗೆ ಸಂಬಂಧಿಸಿದಂತೆ ನಮ್ಮ ಜಾಲತಾಣ ಬಳಕೆದಾರರು ಕೇಳುವ ಯಾವುದೇ ಪ್ರಶ್ನೆಗಳಿಗೆ ನೀವೇ ಉತ್ತರಿಸಬೇಕು.

3. ನೀವು ವಸ್ತುನಿಷ್ಠ ಪ್ರಶ್ನೆ ಪತ್ರಿಕೆ (Multiple Choice Question Paper)ಗೆ ಉತ್ತರಿಸಲು ಇಚ್ಛಿಸುವಿರಾದಲ್ಲಿ :

  3.1 ನಿಮ್ಮ ಆಯ್ಕೆಯ ವಿಷಯ ಹಾಗು ನಿಮಗಿರುವ ವಿಷಯ ಪರಿಣಿತಿಯನ್ನು ನಮಗೆ ಮೊದಲು ತಿಳಿಸಬೇಕು.
  3.2 ನೀವು ತಿಳಿಸಿದ ವಿಷಯಕ್ಕೆ ನಮಗೆ ಉತ್ತರ ಬೇಕಾದ ಪ್ರಶ್ನೆ ಪತ್ರಿಕೆಯನ್ನು ನಾವು ನಿಮ್ಮ ಇ-ಮೇಲ್ ಖಾತೆಗೆ ಕಳಿಸುತ್ತೇವೆ. ಈ ಪ್ರಶ್ನೆ ಪತ್ರಿಕೆಗಳಲ್ಲದೆ ಬೇರಾವುದೇ ಪ್ರಶ್ನೆ ಪತ್ರಿಕೆಗಳನ್ನು ನೀವೇ ಆರಿಸಿಕೊಂಡು ಉತ್ತರಿಸಿದಲ್ಲಿ ಅದಕ್ಕೆ ಯಾವುದೇ ರೀತಿಯ ಹಣ ಸಂದಾಯ ಮಾಡುವುದಿಲ್ಲ.
  3.3 ಪ್ರಶ್ನೆ ಪತ್ರಿಕೆಗೆ ಉತ್ತರಿಸಿ ನಿಗದಿತ ಸಮಯದಲ್ಲಿ ನಮಗೆ ಕಳಿಸತಕ್ಕದ್ದು.
  3.4 ಅಗತ್ಯವಿದ್ದಲ್ಲಿ ಉತ್ತರಕ್ಕೆ ಸೂಕ್ತ ವಿವರಣೆ ಕೊಡಬೇಕು ಮತ್ತು ಉತ್ತರಗಳು ಗೊಂದಲ ಮುಕ್ತವಾಗಿರಬೇಕು.
  3.5 ಲೆಕ್ಕಗಳನ್ನು ಬಿಡಿಸಿದ ವಿಧಾನ ತೋರಿಸಲೇಬೇಕು.
  3.6 ನೀವು ಕಳಿಸುವ ಉತ್ತರಗಳನ್ನು ನಮ್ಮ ಸಂಪಾದಕರು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ತಿದ್ದುಪಡಿಗಳನ್ನು ಮಾಡಿ ನಿಮ್ಮ ಉತ್ತರಗಳನ್ನು ನಿಮ್ಮ ಹೆಸರು ಹಾಗೂ ಪದವಿಯಡಿಯಲ್ಲಿಯೇ ನಮ್ಮ ಜಾಲತಾಣದಲ್ಲಿ ಪ್ರಕಟಿಸುವರು. ಒಂದು ವೇಳೆ ಪರಿಶೀಲಿಸುವ ಸಮಯದಲ್ಲಿ ನಿಮ್ಮ ಉತ್ತರಗಳು ಅಪೂರ್ಣ, ಅಸ್ಪಷ್ಟ ಅಥವಾ ತಪ್ಪಾಗಿದಲ್ಲಿ ನಿಮ್ಮ ಸಲ್ಲಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುವುದು. ಇಂತಹ ಸಲ್ಲಿಕೆಗಳಿಗೆ ಯಾವುದೇ ರೀತಿಯ ಹಣ ಸಂದಾಯ ಮಾಡುವುದಿಲ್ಲ ಹಾಗೂ ಮುಂದೆ ಯಾವುದೇ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನೂ ಸ್ವೀಕರಿಸುವುದಿಲ್ಲ.
  3.7 ನಿಮ್ಮ ಉತ್ತರಗಳಿಗೆ ಸಂಬಂಧಿಸಿದಂತೆ ನಮ್ಮ ಜಾಲತಾಣ ಬಳಕೆದಾರರು ಕೇಳುವ ಯಾವುದೇ ಪ್ರಶ್ನೆಗಳಿಗೆ ನೀವೇ ಉತ್ತರಿಸಬೇಕು.

ಹಣ ಪಾವತಿಯ ಕುರಿತು:

 ಹಣವನ್ನು ತಿಂಗಳಿಗೂಮ್ಮೆ ನಿಮ್ಮ ಯಾವುದೇ ಸಲ್ಲಿಕೆಗಳು ಪ್ರಕಟಗೊಂಡ ತಿಂಗಳ ಕೊನೆಯಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡಿನ ವಿದ್ಯುನ್ಮಾನ ನಕಲು, ಬ್ಯಾಂಕ್ ಹೆಸರು, ಬ್ಯಾಂಕಿನ ಬ್ರಾಂಚ್, ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ IFSC ಕೋಡ್ ಕಡ್ಡಾಯವಾಗಿ ಕೊಡಬೇಕು. ಈ ಮಾಹಿತಿಯು, ಹಣವು ನಿಮ್ಮ ಖಾತೆಗೇ ಜಮೆ ಆಗುವುದನ್ನು ಖಚಿತ ಮಾಡಿಕೊಳ್ಳಲು ಮಾತ್ರ. ಈ ಮಾಹಿತಿಯು ಯಾವುದೇ ರೀತಿಯಲ್ಲಿ ದುರುಪಯೋಗವಾಗುವುದಿಲ್ಲ. ಬ್ಯಾಂಕ್ ಖಾತೆಯು ನಿಮ್ಮ ಹೆಸರಲ್ಲೇ ಇರತಕ್ಕದ್ದು. ನಿಮ್ಮ ಮನೆಯಲ್ಲಿರುವರ, ಸಂಬಂಧಿಕರ ಅಥವಾ ಗೆಳೆಯರ ಖಾತೆಯನ್ನು ನಾವು ಸ್ವೀಕರಿಸುವುದಿಲ್ಲ.
ಈ ಎಲ್ಲಾ ಮೇಲ್ಕಂಡ ವಿಷಯಗಳನ್ನು ಓದಿದ ಬಳಿಕ ನಿಮಗೆ ನಮ್ಮ ನಿಯಮಗಳಿಗೆ ಒಪ್ಪಿಗೆಯಿದ್ದರೆ teamgnanadeevige@gmail.com ಗೆ ಇ-ಮೇಲ್ ಮಾಡಿ ನಮ್ಮನ್ನು ಸಂಪರ್ಕಿಸಿ.